ಟಿ20 ವಿಶ್ವಕಪ್ 2026: ಭಾರತ ಅಂತಿಮ 15 ಆಟಗಾರರು ಘೋಷಣೆ, ಅಕ್ಷರ್ ಉಪನಾಯಕ

2026ರ ಐಸಿಸಿ ಪುರುಷರ ಟಿ20 ವಿಶ್ವಕಪ್‌ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಂತಿಮ 15 ಸದಸ್ಯರ ಭಾರತ ತಂಡವನ್ನು ಘೋಷಿಸಿದೆ. ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರಿಗೆ ತಂಡದ ನಾಯಕತ್ವ ವಹಿಸಲಾಗಿದ್ದು, ಅಕ್ಷರ್ ಪಟೇಲ್ ಉಪನಾಯಕರಾಗಿ ನೇಮಕಗೊಂಡಿದ್ದಾರೆ.

ಈ ವಿಶ್ವಕಪ್ ಫೆಬ್ರವರಿ 7 ರಿಂದ ಮಾರ್ಚ್ 8ರವರೆಗೆ ಭಾರತ ಮತ್ತು ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ನಡೆಯಲಿದೆ. ಭಾರತ ತಂಡವನ್ನು ಸಮತೋಲನದ ಬ್ಯಾಟಿಂಗ್–ಬೌಲಿಂಗ್ ಸಂಯೋಜನೆಯೊಂದಿಗೆ ಆಯ್ಕೆ ಮಾಡಲಾಗಿದೆ.
ಭಾರತ ತಂಡದ ವಿವರ:
ಬ್ಯಾಟರ್‌ಗಳು:
ಸೂರ್ಯಕುಮಾರ್ ಯಾದವ್, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ರಿಂಕು ಸಿಂಗ್
ವಿಕೆಟ್ ಕೀಪರ್‌ಗಳು:
ಸಂಜು ಸ್ಯಾಮ್ಸನ್, ಇಶಾನ್ ಕಿಶನ್
ಆಲ್‌ರೌಂಡರ್‌ಗಳು:
ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್
ಬೌಲರ್‌ಗಳು:
ಜಸ್ಪ್ರೀತ್ ಬುಮ್ರಾ, ಅರ್ಶದೀಪ್ ಸಿಂಗ್, ಹರ್ಷಿತ್ ರಾಣಾ, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ
ಈ ತಂಡದಲ್ಲಿ ಸ್ಟಾರ್ ಬ್ಯಾಟರ್ ಶುಭಮನ್ ಗಿಲ್ ಅವರಿಗೆ ಸ್ಥಾನ ಲಭಿಸದಿರುವುದು ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಆಯ್ಕೆ ಸಮಿತಿಯು ಟಿ20 ಫಾರ್ಮ್ಯಾಟ್‌ಗೆ ಅನುಕೂಲವಾಗುವ ಆಟಗಾರರಿಗೆ ಆದ್ಯತೆ ನೀಡಿದೆ ಎನ್ನಲಾಗಿದೆ.
ಭಾರತ ತಂಡವನ್ನು ಗುಂಪು Aಯಲ್ಲಿ ಸ್ಥಾನಮಾನ ನೀಡಲಾಗಿದ್ದು, ಪಾಕಿಸ್ತಾನ, ನೆದರ್ಲ್ಯಾಂಡ್ಸ್, ಯುಎಸ್ಎ ಮತ್ತು ನಮೀಬಿಯಾ ತಂಡಗಳೊಂದಿಗೆ ಭಾರತ ಮುಖಾಮುಖಿಯಾಗಲಿದೆ. ವಿಶೇಷವಾಗಿ ಭಾರತ–ಪಾಕಿಸ್ತಾನ ಪಂದ್ಯವು ಟೂರ್ನಿಯ ಅತ್ಯಂತ ನಿರೀಕ್ಷಿತ ಪಂದ್ಯವಾಗಲಿದೆ.
2026ರ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವನ್ನು ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ.

Leave a Comment