ಭಾರತದಲ್ಲಿ ಹಿಂದೂ ಧರ್ಮ ಶ್ರೇಷ್ಠ ಧರ್ಮ ವಾಗಿ ಪ್ರಕಾಶಿಸುತ್ತಿದೆ ಶ್ರೀ ಮಂಗೇಶ್ ಭೇಂಡೆ

ಹೊಸನಗರ : ಭಾರತದಲ್ಲಿ ಹಿಂದೂ ಧರ್ಮ ಶ್ರೇಷ್ಠ ಧರ್ಮ ವಾಗಿದೆ ಪ್ರಕಾಶಿಸುತ್ತಿದೆ ಅದರಿಂದಲೇ ಇಂದು ಭಾರತ   ಜಗತ್ತಿನಲ್ಲಿ ಒಂದು ವಿಶಿಷ್ಟ ಭೂಮಿಯಾಗಿದ್ದು ಇದನ್ನು ದೇವಭೂಮಿ ಎಂದು ಕರೆಯುತ್ತಾರೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ವ್ಯವಸ್ಥಾ ಪ್ರಮುಖರಾದ ಶ್ರೀಯುತ ಮಂಗೇಶ್ ಭೇಂಡೆಯವರು ಹೇಳಿದರು 

ಪಟ್ಟಣದ ಗಾಯಿತ್ರಿ ಮಂದಿರದಲ್ಲಿ ಹಿಂದೂ ಸಂಗಮ ಆಯೋಜನ ಸಮಿತಿ ಹೊಸನಗರ ಪಟ್ಟಣ ಇವರ ಆಶ್ರಯದಲ್ಲಿ ನಡೆದ ವಿರಾಟ್ ಹಿಂದೂ ಸಮಾಜೋತ್ಸವದ ದಿಕ್ಸೂಚಿ  ಭಾಷಣಗಾರರಾಗಿ ಮಾತನಾಡಿದ ಅವರು
ಜಗತ್ತಿನಲ್ಲಿ ಎಷ್ಟೋ   ಧರ್ಮಗಳು ಇಂದು ಸಂಸ್ಕೃತಿಗಳು ನಶಿಸಿ ಹೋಗುತ್ತಿದೆ ಆದರೆ  ಹಿಂದೂ ಧರ್ಮದ ಎಲ್ಲಾ ಆಚಾರ ಸಂಸ್ಕೃತಿ ಪದ್ಧತಿಗಳು ಇಂದಿಗೂ ಜೀವಂತವಾಗಿದೆ  ಅಂತಹ ಒಂದು ಶ್ರೇಷ್ಠವಾದ ಸಂಸ್ಕೃತಿ ಪರಂಪರೆಯನ್ನು ಇಂದಿನ ಕಾಲಘಟ್ಟದಲ್ಲಿ  ನಾವೆಲ್ಲರೂ  ಉಳಿಸಿಕೊಳ್ಳುವ ಪ್ರಯತ್ನವನ್ನು  ಮಾಡಬೇಕಾಗಿದೆ.


ವಿದೇಶದಲ್ಲಿ ನಮ್ಮ ಭಾರತೀಯ ಸಂಸ್ಕೃತಿಯನ್ನು ಹೆಮ್ಮೆಯಿಂದ ಒಪ್ಪಿಕೊಳ್ಳುತ್ತಿದ್ದಾರೆ  ಇಲ್ಲಿನ ಆಚಾರ ವಿಚಾರ ಪದ್ದತಿಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನ ಪಡುತ್ತಿದ್ದಾರೆ  ಆದರೆ ನಮ್ಮ ದೌರ್ಭಾಗ್ಯ  ಇಲ್ಲಿರುವ ಕೆಲವೊಂದಿಷ್ಟು ಮಂದಿಗಳು ನಮ್ಮ ಸಂಸ್ಕೃತಿಯ ವಿರುದ್ಧವಾಗಿ  ನಡೆದುಕೊಳ್ಳುತ್ತ ವಿದೇಶಿ ಸಂಸ್ಕೃತಿಯನ್ನ  ಒಪ್ಪಿಕೊಳ್ಳುತ್ತಿರುವುದು  ಕೇದಕರದ ಸಂಗತಿಯಾಗಿದೆ.

ಮಕ್ಕಳಿಗೆ ಅನ್ನ ಬಡಿಸುವುದು ಅಮ್ಮನ ಹಕ್ಕು
ಪ್ರತಿಯೊಬ್ಬ ತಾಯಿಯ ಮುಖ್ಯ ಕರ್ತವ್ಯ ಮಕ್ಕಳಿಗೆ ದಿನನಿತ್ಯ ಅನ್ನ ಬಡಿಸುವುದು ಅದು ಅವರ ಹಕ್ಕು ಇಂದಿನ ದಿನಗಳಲ್ಲಿ ಮಕ್ಕಳೇ ಅನ್ನವನ್ನು ಬಳಸಿಕೊಳ್ಳುವಂತ ಸ್ಥಿತಿ ನಿರ್ಮಾಣವಾಗುತ್ತಿದೆ  ಇದು ಒಳ್ಳೆಯ ಪದ್ಧತಿಯಲ್ಲ,  ಅಮ್ಮ ನೀಡುವಂತಹ ಒಂದೊಂದು ತುತ್ತುಗಳು ಕೂಡ ಮಕ್ಕಳಿಗೆ ಜ್ಞಾನದ ಸವಿಯನ್ನ
ಉಣಪಡಿಸುತ್ತದೆ ಜೊತೆಗೆ  ಪ್ರೀತಿ ವಾತ್ಸಲ್ಯದ ಮಮತೆಯನ್ನು ಕಲಿಸಿಕೊಡುತ್ತದೆ  ಹಾಗಾಗಿ ತಾಯಂದಿರು ಈ ಒಂದು ಕರ್ತವ್ಯವನ್ನು ತಮ್ಮ ಹಕ್ಕೆಂದು ಭಾವಿಸಿ ದಿನ ನಿತ್ಯ ತಮ್ಮ ಮಕ್ಕಳಿಗೆ ತಾವೇ ಉಣಬಡಿಸುವುದು ಉತ್ತಮ ಎಂದು ಸಲಹೆ ನೀಡಿದರು.


ಭಗವಂತನ ಜನ್ಮ ಭೂಮಿ ಭಾರತ
ಈ ಭಾರತ ಸಾಕ್ಷತ್ ಭಗವಂತರು ಜನ್ಮ ತಾಳಿದಂತ ಪುಣ್ಯಭೂಮಿಯಾಗಿದೆ  ಇಂತಹ ಸ್ವರ್ಗದಂತಹ ಪುಣ್ಯ ಭೂಮಿಯಲ್ಲಿ ನಾವೆಲ್ಲರೂ ಮನುಷ್ಯರಾಗಿ ಹುಟ್ಟಿದೇವೆ ಅದು ಅಲ್ಲದೆ ಹಿಂದುವಾಗಿ ಹುಟ್ಟಿರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ ಜೊತೆಗೆ  ದೇಶದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ನಮ್ಮೆಲ್ಲರ ಸಹಕಾರ ಹೆಚ್ಚಿನದಾಗಿರಬೇಕಾಗಿ ಎಂದು ಈ ಸಂದರ್ಭದಲ್ಲಿ ಹೇಳಿದರು.


ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀಯುತ ಕೃಷ್ಣ ಹಾಗೂ ಮಹಿಳಾ ಉದ್ಯೋಗಿಯಾಗಿರುವಂತ ಶ್ರೀಮತಿ ವಸಂತಿ ಕೊತ್ವಾಲ್ ರವರು ಉಪಸ್ಥಿತಿ ಇದ್ದರು
ಬೆಳಿಗ್ಗೆ ಗೋಪೂಜೆಯೊಂದಿಗೆ ಆರಂಭವಾದ  ವಿರಾಟ್ ಹಿಂದೂ ಸಮಾಜೋತ್ಸವ  ಕಾರ್ಯಕ್ರಮದಲ್ಲಿ ಮಾತೇಯರಿಂದ  ಶ್ರೀಮದ್ ಭಗವದ್ಗೀತಾ 11ನೇ ಅಧ್ಯಾಯವನ್ನು ಪಟ್ಟಣ ಮಾಡಲಾಯಿತು  ಹಾಗೂ ಉತ್ತಮ ಹಿಂದೂ ಮನೆ ಎಂಬ  ಚಿಂತನಾ  ಚರ್ಚೆಯನ್ನು  ಏರ್ಪಡಿಸಲಾಗಿತ್ತು

ಎನ್,ಆರ್,ದೇವಾನಂದ್ ಸ್ವಾಗತಿಸಿ ರಮೇಶ್ ಹಲಿಸಿನ ಕಟ್ಟೆ ಪರಿಚಯಿಸಿ  ಗಣೇಶ್ ಮಧುಕರ್ ನಿರೂಪಿಸಿದರು

Leave a Comment