
ಮಹಿಳಾ ಪ್ರೀಮಿಯರ್ ಲೀಗ್ (WPL) 2026ರ ಎಲಿಮಿನೇಟರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗುಜರಾತ್ ಜೈಂಟ್ಸ್ ವಿರುದ್ಧ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ ಫೈನಲ್ಗೆ ಲಗ್ಗೆ ಇಟ್ಟಿದೆ.
ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಜೈಂಟ್ಸ್ ತಂಡ, ಡೆಲ್ಲಿ ಕ್ಯಾಪಿಟಲ್ಸ್ನ ನಿಯಂತ್ರಿತ ಹಾಗೂ ಶಿಸ್ತಿನ ಬೌಲಿಂಗ ದಾಳಿಗೆ ತತ್ತರಿಸಿ 20 ಓವರ್ಗಳಲ್ಲಿ7 ರನ್ಗಳಿಗೆ ಸೀಮಿತವಾಯಿತು. ಗುಜರಾತ್ ಪರ ಬೆತ್ ಮೂನಿ ಅಜೇಯ 62 ರನ್ ಗಳಿಸಿ ತಂಡಕ್ಕೆ ಆಸರೆಯಾದರು.

ಡೆಲ್ಲಿ ಪರ ಚಿನೆಲ್ ಹೆನ್ರಿ 3 ವಿಕೆಟ್ಗಳನ್ನು ಪಡೆದು ಬೌಲಿಂಗ್ನಲ್ಲಿ ಮಿಂಚಿದರೆ, ಉಳಿದ ಬೌಲರ್ಗಳು ಶಿಸ್ತು ಬದ್ಧವಾಗಿ ಬೋಲಿಂಗ್ ಮಾಡಿದರು.
ನಂತರ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆರಂಭದಿಂದಲೇ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತು. ಲಿಜೆಲ್ ಲೀ (43 ರನ್) ಮತ್ತು ಜೆಮಿಮಾ ರೋಡ್ರಿಗ್ಸ್ (41 ರನ್) ಅವರ ಜವಾಬ್ದಾರಿಯುತ ಹಾಗೂ ವೇಗದ ಬ್ಯಾಟಿಂಗ್ ತಂಡದ ಗೆಲುವಿಗೆ ಬಲ ನೀಡಿತು. ಡೆಲ್ಲಿ ತಂಡ 15.4 ಓವರ್ಗಳಲ್ಲಿ 169/3 ರನ್ಗಳನ್ನು ಗಳಿಸಿ, 26 ಎಸೆತಗಳು ಬಾಕಿ ಇರುವಂತೆಯೇ ಪಂದ್ಯವನ್ನು ಸುಲಭವಾಗಿ ತನ್ನದಾಗಿಸಿಕೊಂಡಿತು.

ಪಂದ್ಯಶ್ರೇಷ್ಠ ಪ್ರಶಸ್ತಿ:
ಬೌಲಿಂಗ್ನಲ್ಲಿ 3 ಪ್ರಮುಖ ವಿಕೆಟ್ಗಳನ್ನು ಕಬಳಿಸಿದ ಚಿನೆಲ್ ಹೆನ್ರಿ (Chinelle Henry) ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿದೆ.

ಈ ಗೆಲುವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಫೆಬ್ರವರಿ 5ರಂದು ನಡೆಯಲಿರುವ ಫೈನಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಎದುರಿಸಲು ಸಜ್ಜಾಗಿದೆ.









