
ಹೊಸನಗರ: ತಾಲೂಕಿನ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ವತಿಯಿಂದ ಪ್ರಾರಂಭಿಕ ತರಬೇತಿ ಕ್ಯಾಂಪ್ ಮೇ 7ರ ಸಂಜೆದಿಂದ ಮೇ 10ರ ಮಧ್ಯಾಹ್ನದವರೆಗೆ ಹೊಸನಗರ ಪಟ್ಟಣದಲ್ಲಿ ನಡೆಯಲಿದೆ. ಈ ಕ್ಯಾಂಪ್ ಪಟ್ಟಣದ ಶ್ರೀ ಗುರೂಜಿ ಇಂಟರ್ನ್ಯಾಷನಲ್ ರೆಸಿಡೆನ್ಸಿಯಲ್ ಸ್ಕೂಲ್ ಆವರಣದಲ್ಲಿ ಆಯೋಜಿಸಲಾಗಿದೆ.
ತಾಲೂಕಿನ ವಿವಿಧ ಗ್ರಾಮಗಳಿಂದ ಶಿಕ್ಷಾರ್ಥಿಗಳು ಶಿಬಿರದಲ್ಲಿ ಭಾಗವಹಿಸಲಿದ್ದು, ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಹಲವು ಚಟುವಟಿಕೆಗಳು ನಡೆಯಲಿವೆ. ಶಿಬಿರದಲ್ಲಿ ಆಟಗಳು, ಯೋಗಾಭ್ಯಾಸ, ದೇಶಭಕ್ತಿಯ ಕಥನಗಳು, ರಾಷ್ಟ್ರೀಯ ವಿಚಾರಗಳ ಮಂಥನ, ಬೌದ್ಧಿಕ ಕಾರ್ಯಕ್ರಮಗಳು ಮತ್ತು ಪ್ರಶ್ನೋತ್ತರ ಸತ್ರಗಳು ಇರಲಿವೆ.

ಶಿಬಿರದಲ್ಲಿ ಏನು ಏನು ಇರಲಿದೆ?
* ಆಟಗಳು ಮತ್ತು ಗುಂಪು ಚಟುವಟಿಕೆಗಳು.
* ಯೋಗಾಭ್ಯಾಸ ಮತ್ತು ವ್ಯಾಯಾಮ.
* ದೇಶಭಕ್ತಿಯ ಕಥನಗಳು.
* ರಾಷ್ಟ್ರೀಯ ವಿಚಾರಗಳ ಮಂಥನ.
* ಬೌದ್ಧಿಕ ಕಾರ್ಯಕ್ರಮಗಳು,ಪ್ರಶ್ನೋತ್ತರ.
* ವ್ಯಕ್ತಿತ್ವ ವಿಕಸನ ತರಬೇತಿ
ಯಾರೆಲ್ಲಾ ಭಾಗವಹಿಸಬಹುದು?
* 8ನೇ ತರಗತಿ ಪಾಸ್ ಆಗಿ 9ನೇ ತರಗತಿ ಓದುತ್ತಿರುವ. *ವಿದ್ಯಾರ್ಥಿಗಳು ಮತ್ತು ಮೇಲ್ಪಟ್ಟವರು.
*ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳು
*ಕೃಷಿಕರು,ಉದ್ಯೋಗಿಗಳು,ವ್ಯಾಪಾರಸ್ಥರು
*14 ರಿಂದ 60 ವರ್ಷದೊಳಗಿನ ಆಸಕ್ತರು
ಶಿಬಿರದ ವಿಶೇಷತೆ ಏನು?
* ದೇಶಭಕ್ತಿ ಮತ್ತು ರಾಷ್ಟ್ರೀಯ ಚಿಂತನೆಗೆ ಉತ್ತೇಜನ
* ಶಿಸ್ತು ಮತ್ತು ಸಂಘಟನಾ ಜೀವನದ ಅನುಭವ
* ಹಿಂದೂ ಸಂಸ್ಕಾರ ಮತ್ತು ಮೌಲ್ಯಗಳ ಪರಿಚಯ
* ಆತ್ಮರಕ್ಷಣಾ ಕೌಶಲ್ಯಗಳ ತರಬೇತಿ
* ಜೀವನ ಮೌಲ್ಯಗಳ ಬೋಧನೆ
*ದೈಹಿಕ ಮತ್ತು ಮಾನಸಿಕ ಅಭಿವೃದ್ಧಿಗೆ ಒತ್ತು
* ಒಗ್ಗಟ್ಟಿನ ಜೀವನ ಮತ್ತು ನಾಯಕತ್ವ ಗುಣಗಳ ಬೆಳವಣಿಗೆ
ಹೊಸನಗರ ತಾಲೂಕಿನ ಎಲ್ಲ ಗ್ರಾಮಗಳಿಂದ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದ್ದು, ಮುಂಚಿತವಾಗಿ ಹೆಸರು ನೊಂದಾಯಿಸಿಕೊಳ್ಳಲು ತಿಳಿಸಿದ್ದಾರೆ. 100.ರೂ ಶಿಬಿರ ಶುಲ್ಕವನ್ನು ನಿಗದಿಪಡಿಸಲಾಗಿದೆ . ಹೆಚ್ಚಿನ ಮಾಹಿತಿಗಾಗಿ ಆರ್ಎಸ್ಎಸ್ ಸಂಪರ್ಕ ವಿಭಾಗವನ್ನು ಸಂಪರ್ಕಿಸಲು ಕೋರಲಾಗಿದೆ.









